ಬಂಗಾಳ ಕೊಲ್ಲಿ ಸಮುದ್ರದಲ್ಲಿ ಹುಟ್ಟಿ ಉಲ್ಬಣಗೊಳ್ಳುತ್ತಿರುವಂತಹ ಮೊಂಥ ಚಂಡು ಮಾರುತ ಪ್ರಭಾವದಿಂದಾಗಿ ಕರ್ನಾಟಕದ ಕೆಲವು ಜಿಲ್ಲೆಗಳಿಗೆ ಭಾರಿ ಪ್ರಮಾಣದ ಮಳೆ ( heavy rainfall alert ) ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಮುಂದಿನ ಮೂರು ದಿನಗಳ ಕಾಲ ರಾಜ್ಯದ ಹಲವು ಭಾಗಗಳಲ್ಲಿ ಭಾರಿ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಈ ಚಂಡಮಾರುತದ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ನಾಡಿದ್ದು ಅತಿಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ.
Latest news: ಕರ್ನಾಟಕದ ಎಲ್ಲಾ ಪೊಲೀಸರಿಗೆ ಹೊಸ cap ವಿತರಣೆ,ಮಾಹಿತಿ ಇಲ್ಲಿದೆ.
Heavy rainfall alert in karnataka
Montha ಸೈಕ್ಲೋನ್ ಪ್ರಭಾವದಿಂದಾಗಿ ಆಂಧ್ರಪ್ರದೇಶ ಒರಿಸ್ಸಾ ಮತ್ತು ತಮಿಳುನಾಡಿನ ಹಲವು ಜಿಲ್ಲೆಗಳಿಗೆ ಭಾರಿ ಪ್ರಮಾಣದ ಹಾನಿ ಉಂಟಾಗುವ ಸಾಧ್ಯತೆಯಿದ್ದು, ಅಲ್ಲಿನ ಜನರಿಗೆ ಎಚ್ಚರಿಕೆಯಿಂದ ಇರಲು ಮುನ್ಸೂಚನೆ ನೀಡಿದೆ.
ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದ ಗಡಿಭಾಗದ ಜಿಲ್ಲೆಗಳಾದ ಬಳ್ಳಾರಿ ವಿಜಯನಗರ ರಾಯಚೂರು, ಕಲಬುರ್ಗಿ ಕೊಪ್ಪಳ ಬೀದರ್ ಜಿಲ್ಲೆಗಳಲ್ಲಿ ಹೆಚ್ಚು ಮಳೆ ಆಗುವ ಸಾಧ್ಯತೆ ಇರುತ್ತದೆ.
ಎಲ್ಲಾ ಜಿಲ್ಲೆಗಳಿಗೆ ಮಳೆ ಸಾಧ್ಯತೆ.
ಹಾಗೆಯೇ ಚಿಕ್ಕಮಗಳೂರು ಹಾಸನ ಶಿವಮೊಗ್ಗ ಬೆಂಗಳೂರು ಗ್ರಾಮಾಂತರ ಬೆಂಗಳೂರು ನಗರ ಚಿಕ್ಕಬಳ್ಳಾಪುರ ಚಿತ್ರದುರ್ಗ ದಾವಣಗೆರೆ ಕೊಡಗು ಮಂಡ್ಯ ಕೋಲಾರ ಮೈಸೂರು ರಾಮನಗರ ತುಮಕೂರು ಜಿಲ್ಲೆಗಳಲ್ಲಿ ನವಂಬರ್ 2 ರವರೆಗೆ ಮಳೆ ಬೀಳುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೋಡ ಕವಿದ ವಾತಾವರಣ ಮುಂದುವರಿಕೆ.
ಈಗಾಗಲೇ ಹಾವೇರಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ, ಮೂರ್ನಾಲ್ಕು ದಿನಗಳಿಂದ ಮೋಡ ಕವಿದ ವಾತಾವರಣ ಇದ್ದು, ಅಲ್ಲಲ್ಲಿ ಅಲ್ಪ ಪ್ರಮಾಣದ ಮಳೆ ಬಿದ್ದಿದೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳು ಫೈರುಗಳ ಕಟಾವು ಕೆಲಸ ಆರಂಭವಾಗಿದ್ದು, ಇದೀಗ ಚಂಡು ಮಾರುತದ ಹಾವಳಿಯಿಂದ ಜಮೀನಿನಲ್ಲಿಯೇ ಬೆಳೆಗಳು ನಾಶವಾಗುತ್ತಿವೆ.
ಇದೇ ರೀತಿಯ ಇನ್ನು ಹೆಚ್ಚಿನ ಪ್ರತಿನಿತ್ಯ ಪ್ರಚಲಿತ ಘಟನೆಗಳ ಮಾಹಿತಿ ತಿಳಿಯಲು ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿರಿ.

My self Malatesh, from Haveri Karnataka. I have experienced in Kannada news content writing since, 2021 , provide valuable and honest information timely.