ಎಷ್ಟೇ ಹಳೆಯ ಮಂಡಿನೋವಿದ್ದರೂ ಒಂದು ತಿಂಗಳಲ್ಲಿ ಶಾಶ್ವತ ಪರಿಹಾರ,
ಕನ್ನಡ ಬೆಳಗ್ಗೆ ಎದ್ದ ತಕ್ಷಣ ಇದನ್ನು ಕುಡಿದ್ರೆ ಜೀವನ ಪರ್ಯಂತ ನಿಮಗೆ ಕೀಲುಗಳಲ್ಲಿ ನೋವು ಕಾಣಲ್ಲ, ಮೂಳೆಗಳು ವೀಕ್ ಆಗೋದಿಲ್ಲ ಶರೀರದಲ್ಲಿ ವಾತ ಅಂದ್ರೆ ವಾಯು ಹೆಚ್ಚಾಗುದಿಲ್ಲ.

ಶರೀರದಲ್ಲಿ ಕ್ಯಾಲ್ಸಿಯಂನ ಕೊರತೆ ಉಂಟಾಗುದಿಲ್ಲ, ಸೊಂಟ ನೋವು ಉಂಟಾಗುದಿಲ್ಲ. ಈ ಮನೆಮದ್ದು ಮಾಡೋದು ತುಂಬಾನೇ ಸುಲಭ. ಹೇಗೆ ಈ ಮನೆಮದ್ದು ತಯಾರಿಸೋದು? ಹೇಗೆ ಇದನ್ನು ಕುಡಿಬೇಕು? ಇದರಿಂದ ದೊರೆಯುವ ಲಾಭಗಳೇನು? ತಿಳಿಯೋಣ ಬನ್ನಿ.
Latest ನ್ಯೂಸ್,. Gruha lakshmi ಹಣ ಯಾರಿಗೆಲ್ಲ ಜಮಾ ಆಗಿಲ್ಲ!? ಇಲ್ಲಿದೆ ಸಂಪೂರ್ಣ ಮಾಹಿತಿ.
ಸೋಂಪು ಕಾಳು
ಇದಕ್ಕೆ ಮುಖ್ಯವಾಗಿ ಬೇಕಾಗಿರುವ ಸಾಮಗ್ರಿ ಅಂದ್ರೆ ಅದೇ ಸೋಂಪುಕಾಳು. ಸೋಂಪು ಕಾಳಿನ ಬಗ್ಗೆ ನಿಮಗೆಲ್ಲರಿಗೂ ತಿಳಿದೆ ಇದೆ. ಇದರ ಬಗ್ಗೆಎಷ್ಟು ಹೇಳಿದ್ರು ಕಡಿಮೆನೇ. ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ.
ಸೋಂಪುಕಾಳು ಮೆಟಬಾಲಿಸಂ ಅನ್ನು ಹೆಚ್ಚಿಸುತ್ತದೆ. ಸೋಂಪುಕಾಳಿನ ಸೇವನೆಯಿಂದ ಮೂಳೆಗಳಲ್ಲಿ ಕಂಡುಬರುವ ವಾತದ ಸಮಸ್ಯೆಯು ದೂರವಾಗುತ್ತದೆ.
ಇನ್ನು ಇದಕ್ಕೆ ಜೀರಿಗೆ ಕಾಳು ಕೂಡ ಬೇಕಾಗುತ್ತದೆ. ಜೀರಿಗೆ ಕೂಡ ಜೀರ್ಣ ಕ್ರಿಯೆಗೆ ತುಂಬಾನೇ ಒಳ್ಳೆಯದು. ಕಬ್ಬಿಣಾಂಶ ಇದರಲ್ಲಿ ಹೆಚ್ಚಾಗಿರುವುದರಿಂದ ಇದು ರಕ್ತವನ್ನು ಹೆಚ್ಚಿಸುತ್ತದೆ ನಿಶಕ್ತಿ, ಸುಸ್ತನ್ನು ದೂರ ಮಾಡುತ್ತದೆ.
ಮೂಳೆಗಳ ನೋವನ್ನು
ದೂರವಾಗಿಸುತ್ತದೆ. ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ, ಶುಗರ್ ಸಮಸ್ಯೆಯನ್ನು ನಿಯಂತ್ರಣಕ್ಕೆ ತರುತ್ತದೆ.
ಅಜ್ವ ಕಾಳು
ಹಾಗೆ ಕೊನೆಯದಾಗಿ ಮದ್ದಿಗೆ ಬೇಕಾಗಿರುದು ಅಜ್ವಕಾಳು. ಜೀರ್ಣಕ್ರಿಯೆಗೆ ಸಂಬಂಧಿಸಿದ ಎಲ್ಲಾ ತೊಂದರೆಗೆ ಈ ಅಜ್ವೈನ್ ಬಹಳನೇ ಒಳ್ಳೆಯದು.
ಇನ್ನು ಯೂರಿಕ್ ಆಸಿಡ್ನ ತೊಂದರೆಯನ್ನು ಈ ಓಂಕಾಳು ನಿವಾರಿಸುತ್ತದೆ. ನಮಗೆ ಈ ಮೂರು
ವಸ್ತುಗಳು ಈ ಮನೆಮದ್ದು ತಯಾರಿಸುದಕ್ಕೆ ಬೇಕಾಗುತ್ತದೆ.
ತಯಾರಿಸುವ ವಿಧಾನ.
ಒಂದು ಬಾಂಡ್ಲಿಗೆ ಒಂದು ಚಮಚ ಸೋಂಪುಕಾಳು, ಒಂದು ಚಮಚ ಜೀರಿಗೆ, ಒಂದು ಚಮಚದಷ್ಟು ಓಂಕಾಳನ್ನ ಹಾಕಿ ಚೆನ್ನಾಗಿ ಡ್ರೈ ರೋಸ್ಟ್ ಮಾಡಿಕೊಳ್ಳಿ. ಎರಡರಿಂದ ಮೂರು ನಿಮಿಷ ಚೆನ್ನಾಗಿ ಹುರ್ಕೊಳ್ಳಿ, ನಂತರ ಇದನ್ನು ಪೌಡರ್ ಮಾಡಿಕೊಳ್ಳಿ. ಈ ಪೌಡರ್ ಅನ್ನು ಒಂದು ಏರ್ ಟೈಟ್ ಡಬ್ಬದಲ್ಲಿ ಹಾಕಿಡಿ.
ಈ ಪೌಡರ್ ನಿಂದ ದೊರೆಯುವಂತ ಆರೋಗ್ಯ ಲಾಭ ಅಷ್ಟಿಷ್ಟ ಅಲ್ಲ. ಬೆಳಿಗ್ಗೆ ಎದ್ದ ತಕ್ಷಣ ಈ ಪೌಡರ್ ನ ಅರ್ಧ ಚಮಚ ಪೌಡರ್ ಅನ್ನು ತೆಗೆದುಕೊಂಡು ಉಗುರು ಬೆಚ್ಚಗಿನ ನೀರಿಗೆ ಹಾಕಿ ಖಾಲಿ ಹೊಟ್ಟೆಗೆ ಕುಡಿಯಬೇಕು. ಹಾಗೆ ರಾತ್ರಿ ಮಲಗುವ ಮೊದಲು ಕೂಡ ಅರ್ಧ ಚಮಚ ಈ ಪುಡಿಯನ್ನು ನೀರಿಗೆ ಅಥವಾ ಹಾಲಿಗೆ ಬೇಕಾದರೂ ಹಾಕೊಂಡು ಕುಡಿಬಹುದು.
ಬಳಸೋದು ಹೇಗೆ?
ದಿನದಲ್ಲಿ ಎರಡು ಬಾರಿ ಅರ್ಧರ್ಧ ಚಮಚದಷ್ಟು ಈ ಪುಡಿಯನ್ನು ನೀರಿಗೆ ಹಾಕಿ ಕುಡಿಯುವುದರಿಂದ ತುಂಬಾನೇ ಲಾಭ ದೊರೆಯುತ್ತದೆ. ಇನ್ನು ಎರಡು ಬಾರಿ ನೀರಿಗೆ ಸೇರಿಸಿ ಸೇವಿಸಲು ಆಗೋದಿಲ್ಲ ಎನ್ನುವವರು ರಾತ್ರಿ ಬೇಕಾದರೆ ಒಂದು ಬಾರಿ ನೀವು ಒಂದು ಲೋಟ ಹಾಲಿಗೆ ಈ ಪುಡಿಯನ್ನು ಹಾಕಿ ಕುಡಿಬಹುದು.
ಇದು ಬಹಳ ಹಿಂದಿನ ಕಾಲದ ಮನೆಮದ್ದು. ಬಹಳ ಲಾಭ ಈ ಮನೆಮದ್ದಿನಿಂದ ದೊರೆಯುತ್ತದೆ. ಮಲಬದ್ಧತೆ ಅಥವಾ ಕಾನ್ಸ್ಟಿಪೇಶನ್ ಕೆಲವರಿಗೆ ಈ ಸಮಸ್ಯೆ ಇರುತ್ತದೆ. ಅಂತವರಿಗೆ ಇದು ಬಹಳನೇ ಒಳ್ಳೆಯದು. ಇದು ಮಲಬದ್ಧತೆ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.
ಮಲಬದ್ಧತೆ ಯಾಕೆ ಉಂಟಾಗುತ್ತೆ ಹೇಳಿ?
ನೀರು ಕಡಿಮೆ ಕುಡಿಯುವುದರಿಂದ ಹಾಗೂ ನಾರಿನಾಂಶ ಇರುವ ಆಹಾರಗಳನ್ನು ಕಡಿಮೆ ಸೇವಿಸುವುದರಿಂದ ಉಂಟಾಗುತ್ತದೆ. ಜೀರ್ಣ ಕ್ರಿಯೆ ಚೆನ್ನಾಗಿ ಆಗದೆ ಇರುವುದರಿಂದ ಈ ಮಲಬದ್ಧತೆ ಉಂಟಾಗುತ್ತದೆ. ಈ ಮನೆಮದ್ದನ್ನು ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆ ದೂರವಾಗುತ್ತದೆ.
ನೆನಪಿನ ಶಕ್ತಿ ಕಡಿಮೆ ಆಗ್ತಿದ್ದರೆ ಅಂತವರು ಇದನ್ನು ತಪ್ಪದೆ ಕುಡಿಯುವುದು ಒಳ್ಳೆಯದು. ಇನ್ನು ಯಾರಿಗೆಲ್ಲ ಕೀಲು ನೋವು ಅಂತವರಿಗೆ ಇದು ಬಹಳನೇ ಒಳ್ಳೆಯದು. ನಿಮ್ಮ ಮೂಳೆಗಳು ಬಲಿಷ್ಟವಾಗಿರಬೇಕು ಅಂತಿದ್ದರೆ ತಪ್ಪದೆ ದಿನದಲ್ಲಿ ಎರಡು ಬಾರಿ ಈ ಮನೆ ಮದ್ದನ್ನು ತೆಗೆದುಕೊಳ್ಳಿ. ಇವಾಗಂತೂ ಚಳಿಗಾಳ ಶುರುವಾಗಿದೆ.
ಇನ್ನು ಕೀಲು ನೋವು ಹಾಗೆ ಸೊಂಟಗಳಲ್ಲಿ ನೋವು ಕಾಣಿಸಿಕೊಳ್ತಾನೆ ಇರುತ್ತೆ. ಆದ್ದರಿಂದ ತಪ್ಪದೆ ಇದನ್ನು ಕುಡಿಯಿರಿ. ತುಂಬಾನೇ ಆರಾಮ ನಿಮಗೆ ದೊರೆಯುತ್ತೆ, ಹಾಗೆ ನೋವುಗಳು ಕೂಡ ಬೇಗನೆ ನಿವಾರಣೆ ಆಗುತ್ತೆ.
ಇನ್ನು ಕೈ ಕಾಲುಗಳಲ್ಲಿ ಜೋಮು ಹಿಡಿಯುವುದು, ನರಗಳು ಎಳೆಯುವುದು, ವೀಕ್ನೆಸ್, ಮಾಂಸ ಖಂಡಗಳಲ್ಲಿ ನೋವು ಹೀಗೆ ಯಾವುದೇ ಸಮಸ್ಯೆ ಇದ್ರೂ ಕೂಡ ತುಂಬಾನೇ ಒಳ್ಳೆಯದು ಈ ಮನೆ ಮದ್ದು. ಇದನ್ನು ಕುಡಿಯಿರಿ ಈ ಸಮಸ್ಯೆ ಕೂಡ ಬೇಗನೆ ನಿವಾರಣೆ ಆಗುತ್ತೆ. ಇನ್ನು ನಿದ್ರಾಹೀನತೆಗೆ ಈ ದಿನದಲ್ಲಿ ಒಂದು ಬಾರಿ ಅಂದರೆ ರಾತ್ರಿ ಮಲಗುವ ಮೊದಲು ಇದನ್ನು ತಗೊಳಿ ನಿದ್ರೆ ಚೆನ್ನಾಗಿ ಬರುತ್ತೆ.
ಇನ್ನು ಪಾದಗಳಲ್ಲಿ ಉರಿ ಕಾಣಿಸುದು, ತುಟಿಗಳು ಒಡೆಯುವುದು ಇಂತಹ ಸಮಸ್ಯೆ ಇರುವವರು ಈ ಮನೆ ಮದ್ದನ್ನು ದಿನದಲ್ಲಿ ಒಂದು ಬಾರಿ ಕುಡಿಯಿರಿ ಈ ಸಮಸ್ಯೆ ಕೂಡ ಬೇಗನೇ ನಿವಾರಣೆ ಆಗುತ್ತೆ. ಇನ್ನು ಇದು ಜೀರ್ಣ ಕ್ರಿಯೆಯನ್ನು ಹೆಚ್ಚು ಮಾಡುತ್ತದೆ ಆದ್ದರಿಂದ ಅಜೀರ್ಣದ ಸಮಸ್ಯೆ ಇರುವವರಿಗೂ ಕೂಡ ಇದು ಬಹಳನೇ ಒಳ್ಳೆಯದು. ಒಣಕೆಮ್ಮಿನ ಸಮಸ್ಯೆ ಇದೆ ಅನ್ನುವವರು ರಾತ್ರಿ ಮಲಗುವ ಮೊದಲು ಈ ಮನೆ ಮದ್ದನ್ನು ತಗೊಂಡ್ರೆ ಬೇಗನ ನಿಮಗೆ ಆರಾಮ ದೊರೆಯುತ್ತದೆ.
ಇದನ್ನೂ ಓದಿ :. ಪ್ರತಿದಿನ ಸಾಸಿವೆ ತಿಂದರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ.

My self Malatesh, from Haveri Karnataka. I have experienced in Kannada news content writing since, 2021 , provide valuable and honest information timely.