ಪ್ರತೀದಿನ ಸಾಸಿವೆ ಸೇವಿಸಿದರೆ ಏನಾಗುತ್ತೆ? ತಿಳಿದರೆ ಆಶ್ಚರ್ಯ ಪಡುತ್ತೀರಾ..

Share this post

ಪ್ರತೀದಿನ ಸಾಸಿವೆ ಸೇವಿಸಿದರೆ ಏನಾಗುತ್ತೆ? ತಿಳಿದರೆ ಆಶ್ಚರ್ಯ ಪಡುತ್ತೀರಾ

WhatsApp Group Join Now
Telegram Group Join Now

ಸಾಮಾನ್ಯವಾಗಿ ಅಡುಗೆಗಳಲ್ಲಿ ಅದರಲ್ಲೂ ಸಾರು ಸಾಂಬಾರು ಪಲ್ಯ ಚಟ್ನಿ ಮೊದಲಾದ ಅಡುಗೆಗಳಲ್ಲಿ ಒಗ್ಗರಣೆಗೆ ಬಳಸುವ ಈ ಸಾಸಿವೆ ರುಚಿಯನ್ನು ಹೆಚ್ಚಿಸಲು ಹಾಗೂ ಅಡುಗೆಯ ಗಮವನ್ನು ಹೆಚ್ಚಿಸಲು ಬಳಸಲಾಗುತ್ತದೆ.

ಆದರೆ ಇದು ಇಷ್ಟಕ್ಕೆ ಸೀಮಿತವಾಗಿಲ್ಲ. ಬದಲಿಗೆ ಇದರಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನ ಗಳಿವೆ. ಉತ್ತಮ ಆರೋಗ್ಯ ವೃದ್ಧಿಗೆ ಹೇಗೆ ಸಾಸಿವೆಯನ್ನು ಬಳಸಬೇಕು? ಸಾಸಿವೆಯಿಂದ ದೊರೆಯುವ ಆರೋಗ್ಯ ಲಾಭಗಳೇನು? ಎಂದು ಇವತ್ತಿನ ವಿಡಿಯೋನಲ್ಲಿ ತಿಳಿಯೋಣ.

ಕೆಲವು ಪದಾರ್ಥಗಳು ಹೇಗೆಂದರೆ ಅವುಗಳನ್ನು ಬಳಸಿಲ್ಲವೆಂದರೆ ಅಡುಗೆ ಪೂರ್ತಿಯೇ ಆಗುವುದಿಲ್ಲ. ಅಂತಹ ಸಾಲಿಗೆ ಸಾಸಿವೆ ಕೂಡ ಸೇರುತ್ತದೆ. ಇದು ಆಹಾರದಲ್ಲಿ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಸಣ್ಣ ಪುಟ್ಟ ಕಾಯಿಲೆಗಳಿಂದಲೂ ನಮ್ಮನ್ನು
ಮುಕ್ತರಾಗಿಸುತ್ತದೆ.

ಹಲವಾರು ಆರೋಗ್ಯ ಗುಣಗಳನ್ನು ಹೊಂದಿರುವ ಸಾಸಿವೆಯನ್ನು ಶತಮಾನಗಳಿಂದಲೂ ಔಷಧಿಯ ರೂಪದಲ್ಲಿ ಬಳಸಲಾಗುತ್ತಿದೆ. ಹಾಗಿದ್ರೆ ಮೊದಲಿಗೆ ಸಾಸಿವೆಯನ್ನು ನಮ್ಮ ಆಹಾರ ಕ್ರಮದಲ್ಲಿ ಬಳಸಿಕೊಂಡರೆ ಸಿಗುವ ಮುಖ್ಯ ಆರೋಗ್ಯ ಲಾಭಗಳು ಯಾವುದೆಲ್ಲ ಗೊತ್ತಾ ತಲೆನೋವಿಗೆ ಪರಿಹಾರ ದೊರೆಯುತ್ತದೆ.

ತಲೆನೋವು ಮತ್ತು ಮೈಗ್ರೇನ್ ಿಂದ ಬಳಲುತ್ತಿರುವವರಿಗೆ ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಸಾಸಿವೆ ಕಾಳಿನಲ್ಲಿ ಇರುವಂತಹ ಮೆಗ್ನೀಷಿಯಂ ನೋವು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ ದೇಹದ ಅಂಗಾಂಗಗಳಿಗೆ ಆಗಿರುವ ಒತ್ತಡವನ್ನು ಕಡಿಮೆ ಮಾಡುತ್ತದೆ. ಹಾಗಿದ್ರೆ ತಲೆನೋವಿಗೆ ಹೇಗೆ ಸಾಸಿ ಸಾಸಿವೆಯನ್ನು ಬಳಸಬೇಕು.

ಸಾಸಿವೆಯನ್ನು ಸ್ವಲ್ಪ ನೀರಿನಲ್ಲಿ ರುಬ್ಬಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ಅನ್ನು ಹಣೆಗೆ ಹಚ್ಚಿಕೊಳ್ಳಿ. ತಕ್ಷಣವೇ ನಿಮಗೆ ತಲೆನೋವು ಕಡಿಮೆಯಾಗುತ್ತದೆ. ಅಥವಾ ಒಂದು ಚಿಕ್ಕ ಚಮಚ ಹಸಿ ಸಾಸಿವೆಯನ್ನು ಜಗಿದು ತಿನ್ನಬಹುದು. ಇದರಿಂದ ಕೂಡ ತಲೆನೋವಿಗೆ ತಕ್ಷಣ ಪರಿಹಾರ ದೊರೆಯುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಸಾಸಿವೆಯನ್ನು ಅಡುಗೆಯಲ್ಲಿ ಬಳಸುವುದರಿಂದ ಜೀರ್ಣ ವ್ಯವಸ್ಥೆ
ಉತ್ತಮವಾಗುತ್ತದೆ.

ಸಾಸಿವೆ ಕಾಳಿನಲ್ಲಿ ಉತ್ತಮ ಮಟ್ಟದ ನಾರಿನಾಂಶವಿದೆ. ಇದು ಹೊಟ್ಟೆಯ ಚಲನೆಯನ್ನು ಸುಲಭವಾಗಿಸುತ್ತದೆ ಮತ್ತು ದೇಹದಲ್ಲಿ ಜೀರ್ಣಕ್ರಿಯೆಯ ಶಕ್ತಿಯನ್ನು ವೃದ್ಧಿಸುತ್ತದೆ. ಅಜೀರ್ಣತೆ ಉಂಟಾದಾಗ ಸಾಸಿವೆ ಎಣ್ಣೆಯಲ್ಲಿ ಅಡುಗೆ ತಯಾರಿಸಿ ಸೇವಿಸಿದರೆ ಉತ್ತಮ ಅಥವಾ ಸಾಸಿವೆಯನ್ನು ಬಳಸಿ ಚಟ್ನಿ ತಯಾರಿಸಿ ಸೇವಿಸಬಹುದು ಅಥವಾ ಹಸಿ ಸಾಸಿವೆಯನ್ನು ಊಟದ ನಂತರ ಜಗಿದರು ಅಜೀರ್ಣತೆ ದೂರವಾಗುತ್ತದೆ.

ಉಸಿರಾಟದ ಕಾಯಿಲೆಗಳಿಂದ ಪರಿಹಾರ ದೊರೆಯುತ್ತದೆ. ಸಾಸಿವೆ ಕಾಳನ್ನು ಜಗಿಯುವುದರಿಂದ ಶೀತ ಹಾಗೂ ಜ್ವರದ ಸಮಸ್ಯೆಯು ನಿವಾರಣೆಯಾಗುತ್ತದೆ. ಇದು ವಾಯುನಾಳದಲ್ಲಿ ದಲ್ಲಿ ಇರುವಂತಹ ಕಫವನ್ನು ತುಂಬಾ ಪರಿಣಾಮಕಾರಿಯಾಗಿ ನಿವಾರಣೆ ಮಾಡುತ್ತದೆ.

ಇದರಿಂದ ಉಸಿರಾಟದ ತೊಂದರೆ ಕೂಡ ಕಡಿಮೆಯಾಗುತ್ತದೆ. ಬೆನ್ನು ನೋವಿಗೆ ಒಳ್ಳೆಯದು, ಬೆನ್ನು ನೋವು ಅಥವಾ ಸ್ನಾಯು ಸೆಳೆತವಿದ್ದರೆ, ಆಗ ನೀವು ಸಾಸಿವೆ ಕಾಳನ್ನು ಜಗಿಯಿರಿ ಇದರಿಂದ ಸೆಳೆತ ಕಡಿಮೆಯಾಗುತ್ತದೆ ಹಾಗೂ ಸ್ನಾಯುಗಳ ಬಿಗಿತ ಮತ್ತು
ಊತ ಕಡಿಮೆಯಾಗುತ್ತದೆ.

ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹದ ರೋಗ ನಿರೋಧಕ ಶಕ್ತಿ ಕಡಿಮೆಯಾದರೆ ರೋಗಗಳು ಒಂದೊಂದಾಗಿಯೇ ನಮ್ಮನ್ನು ಕಾಡುತ್ತದೆ. ಆದರೆ ಸಾಸಿವೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಇದರಲ್ಲಿರುವ ಖನಿಜಗಳು, ಕಬ್ಬಿಣಾಂಶ, ಮೆಗ್ನೀಷಿಯಂ, ತಾಮ್ರ ಮೊದಲಾದವು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ ಹಾಗೂ ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ.

ಹೃದಯದ ಆರೋಗ್ಯಕ್ಕೆ ಒಳ್ಳೆಯದು ಸಾಸಿವೆ ಕಾಳುಗಳು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಹೃದಯದ ಆರೋಗ್ಯವನ್ನು ವೃದ್ಧಿಸುತ್ತದೆ. ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಜಮೆಯಾಗದಂತೆ ನೋಡಿಕೊಳ್ಳುತ್ತದೆ.

ಆದ್ದರಿಂದ ಪ್ರತಿದಿನ ಸ್ವಲ್ಪ ಹಸಿ ಸಾಸಿವೆ ಜಗಿದರೆ ಹೃದಯ ಆರೋಗ್ಯವಾಗಿರುತ್ತದೆ. ಮೂಳೆ ಹಲ್ಲು ವಸಡು ಕೂದಲನ್ನು ಬಲಪಡಿಸುತ್ತದೆ. ಸಾಸಿವೆ ಕಾಳುಗಳಲ್ಲಿ ಸೆಲೆನಿಯಂ ಉತ್ತಮ ಮಟ್ಟದಲ್ಲಿ ಇರುವ ಕಾರಣದಿಂದ ಇದು ಮೂಳೆಗಳನ್ನು ಬಲಪಡಿಸುತ್ತದೆ.

ಅಷ್ಟೇ ಅಲ್ಲ ಉಗುರು ಕೂದಲು ಮತ್ತು ಹಲ್ಲುಗಳನ್ನು ಸದೃಢಗೊಳಿಸುತ್ತದೆ. ಇನ್ನು ಉತ್ತಮ ಆರೋಗ್ಯ ಲಾಭವನ್ನು ಪಡೆಯಲು ಸಾಸಿವೆಯನ್ನು ಹೇಗೆ ಸೇವಿಸಬೇಕು. ಇದನ್ನು ಅಡುಗೆಯಲ್ಲಿ ಬಳಸಬಹುದು ಅಥವಾ ಪ್ರತಿದಿನ ಹಸಿಯಾಗಿ ಅರ್ಧ ಚಮಚದಷ್ಟು ಸಾಸಿವೆಯನ್ನು ಜಗಿದು ತಿನ್ನಬಹುದು. ಅಥವಾ ಅಡುಗೆಗೆ ಸಾಸಿವೆ ಎಣ್ಣೆಯನ್ನು ಬಳಸಬಹುದು.

ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ಜಾಲತಾಣ ಭೇಟಿ ಮಾಡಿ. ಇಲ್ಲಿ ಒತ್ತಿ,

Related Articles :

ನಿಮ್ಮ ಹಳೆಯ ಮಂಡಿ ನೋವಿಗೆ ಶಾಶ್ವತ ಪರಿಹಾರ ಮಾಡುವಂತ ಮನೆ ಮದ್ದು ಇಲ್ಲಿದೆ.

WhatsApp Group Join Now
Telegram Group Join Now

Leave a Comment