ಬೆಳಿಗ್ಗೆ ಎದ್ದ ತಕ್ಷಣ ಈ ನೀರನ್ನು ಕುಡಿದರೆ ಹಲವಾರು ರೋಗಗಳಿಗೆ ರಾಮಬಾಣ. Health remedies

Share this post

ಬೆಳಿಗ್ಗೆ ಎದ್ದ ತಕ್ಷಣ ಈ ನೀರನ್ನು ಕುಡಿದರೆ ಹಲವಾರು ರೋಗಗಳಿಗೆ ರಾಮಬಾಣ
ನಮ್ಮ ಅಡುಗೆ ಮನೆಯಲ್ಲಿ ಕೊತ್ತಂಬರಿ ಬೀಜ ಇದ್ದೆ ಇರುತ್ತದೆ. ಇದು ಅಡುಗೆಯ ರುಚಿಯನ್ನು
ಹೆಚ್ಚಿಸುವುದು ಅಷ್ಟೇ ಅಲ್ಲ, ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು.

WhatsApp Group Join Now
Telegram Group Join Now

ಆಯುರ್ವೇದದಲ್ಲೂ ದನಿಯಾ ಬೀಜಗಳ ಬಳಕೆ ಮಾಡಲಾಗುತ್ತದೆ. ಇದು ಹಲವಾರು ರೋಗಗಳಿಂದ ನಿಮ್ಮನ್ನು ಕಾಪಾಡುವ ಶಕ್ತಿಯನ್ನು ಹೊಂದಿದೆ. ಹಾಗೆ ಹಲವಾರು ರೋಗಗಳನ್ನು ಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ.

simple home remedies
coriander seeds simple home remedies

ದನಿಯಾ ಬೀಜದ ಉಪಯೋಗಗಳ ಬಗ್ಗೆ ತಿಳಿಯೋಣ.

ಬನ್ನಿ ಹಾಗಾದ್ರೆ ಇವತ್ತಿನ ಲೇಖನದಲ್ಲಿ ದನಿಯಾ ಬೀಜದ ಉಪಯೋಗಗಳ ಬಗ್ಗೆ ತಿಳಿಯೋಣ. ಹಾಗೆ ದನಿಯಾ ಬೀಜವನ್ನು ಹೇಗೆ ಉಪಯೋಗ ಮಾಡಬೇಕು ಇದರಿಂದ ಯಾವೆಲ್ಲ ರೋಗಗಳಿಂದ ಮುಕ್ತಿ ಹೊಂದಬಹುದು ತಿಳಿಯೋಣ.

ನಿಮಗೆ ಗೊತ್ತಾ ದನಿಯಾ ಬೀಜ ಅಥವಾ ಕೊತ್ತಂಬರಿ ಬೀಜದ ಸೇವನೆಯಿಂದ ಭಯಂಕರದಲ್ಲಿ ಭಯಂಕರ ರೋಗಗಳನ್ನು ಗುಣಪಡಿಸಿಕೊಳ್ಳಬಹುದು. ನಿಮಗೆ ಡೈಜೆಶನ್ ಸಂಬಂಧಿ ಕಾಯಿಲೆಗಳಿದ್ದರೆ, ಮಧುಮೇಹ ಸಮಸ್ಯೆ ಇದ್ದರೆ, ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾಗಿದ್ರ

ಆರ್ಥರೈಟಿಸ್ ರಕ್ತಹೀನತೆ ಹಾರ್ಟ್ ಪ್ರಾಬ್ಲಮ್ಸ್ ಪಿರಿಯಡ್ಸ್ ಸಂಬಂಧಿಸಿದ ಯಾವುದೇ ತೊಂದರೆ ಇದ್ರೆ, ಅಂದ್ರೆ ಇರ್ರೆಗ್ಯುಲರ್ ಪಿರಿಯಡ್ಸ್ ಈ ರೀತಿಯ ತೊಂದರೆ ಇದ್ರೆ, ಇನ್ನು ಹೈ ಕೊಲೆಸ್ಟ್ರಾಲ್ ಸಮಸ್ಯೆ ಇದ್ರೆ , ದೇಹದಲ್ಲಿ ತೂಕ ಹೆಚ್ಚಾಗಿದ್ರೆ, ಥೈರಾಯ್ಡ್ ಇದ್ರೆ ಇವಾಗಂತೂ ಥೈರಾಯ್ಡ್ ಸಮಸ್ಯೆ ಬಹಳ ಹೆಣ್ಣು ಮಕ್ಕಳಿಗಿದೆ ಈ ಸಮಸ್ಯೆಗೂ ಕೂಡ ದನಿಯಾ ಬೀಜ ಬಹಳ ಒಳ್ಳೆಯದು.

ಅಷ್ಟೇ ಅಲ್ಲ ಕೂದಲು ಹಾಗೂ ಸ್ಕಿನ್ ಪ್ರಾಬ್ಲಮ್ಸ್ಗೂ ಉತ್ತಮ ದನಿಯಾ ಬೀಜ. ಬಿಪಿ ಸಮಸ್ಯೆಗೂ ಬಹಳನೇ ಉತ್ತಮ.

ಇದನ್ನೂ ಓದಿ: ಪ್ರತೀದಿನ ಸಾಸಿವೆ ಸೇವಿಸಿದರೆ ಏನಾಗುತ್ತೆ? ತಿಳಿದರೆ ಆಶ್ಚರ್ಯ ಪಡುತ್ತೀರಾ..

ದನಿಯಾ ಬೀಜದಿಂದ ಇಷ್ಟೆಲ್ಲ ಲಾಭವನ್ನು ಪಡೆಯಲು ಸೇವಿಸುವ ಸರಿಯಾದ ವಿಧಾನವಿದೆ, ಹಾಗೆ ಮಾಡಿದ್ರೆ 100% ನಿಮಗೆ ಸಮಸ್ಯೆಗೆ ಪರಿಹಾರ ದೊರೆತಂತೆ. ಹೇಗೆ ಅಂತ ನಾನು ಇವತ್ತು ತಿಳಿಸಿಕೊಡ್ತಾ ಇದ್ದೇನೆ.

ಇದಕ್ಕೆ ನೀವು ಮಾಡಬೇಕಾದದ್ದು ಇಷ್ಟೇ, ರಾತ್ರಿ ಮಲಗುವ ಮೊದಲು ಒಂದು ಲೋಟ ನೀರಿಗೆ ಒಂದು ಚಮಚ ದನಿಯಾ ಬೀಜವನ್ನು ಹಾಕಿ ರಾತ್ರಿ ಎಲ್ಲ ನೆನೆಸಿಡಿ. ಬೆಳಗ್ಗೆ ಇದನ್ನು ಕುದಿಸಿ ಒಂದು ಗ್ಲಾಸ್ ನೀರು ಅರ್ಧ ಲೋಟ ಆಗುವವರೆಗೂ ಕುದಿಸಿ ನಂತರ ಇದನ್ನು ಶೋಧಿಸಿ ಕುಡಿಯಿರಿ. ಬಿಸಿ ಇರುವಾಗಲೇ ಕುಡಿಬೇಕು.

ಯಾವಾಗ ಕುಡಿಬೇಕು? ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಬೇಕು. ಈ ಕೊತ್ತಂಬರಿ ಬೀಜದ ನೀರು ಬಹಳ ತಂಪು ಇದು ದೇಹದಲ್ಲಿರುವ ಅಧಿಕ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ. ಇನ್ನು ಕೆಲವರಿಗೆ ದೇಹದಲ್ಲಿ
ಪ್ರತಿದಿನ ಉಷ್ಣತೆ ಹೆಚ್ಚಾಗಿರುತ್ತದೆ, ಹಾಗೆ ಪಾದಗಳಲ್ಲೂ ಉರಿ ಕಾಣಿಸಿಕೊಳ್ತಾ ಇರುತ್ತೆ. ಅವರು
ಈ ನೀರನ್ನು ಕುಡಿದರೆ ಬಹಳ ಒಳ್ಳೆಯದು.

ನಿಮ್ಮ ಹಳೆಯ ಮಂಡಿ ನೋವು ಇಲ್ಲಿದೆ ಶಾಶ್ವತ ಪರಿಹಾರ ಮಾಡುವಂತ ಟಿಪ್ಸ್.

ಇನ್ನು ವೇಗವಾಗಿ ತೂಕ ಇಳಿಸಿಕೊಳ್ಳಲು ಬಯಸಿದರೆ ಕೊತ್ತಂಬರಿ ನೀರು ಸಹಾಯ ಮಾಡುತ್ತದೆ. ಇದು ನಿಮ್ಮ ದೇಹದಲ್ಲಿರುವ ಅಧಿಕ ಕೊಬ್ಬನ್ನು ಬೆಣ್ಣೆಯಂತೆ ಕರಗಿಸುತ್ತದೆ. ಇನ್ನು ಕೆಲವರಿಗೆ ಏನೇ ತಿಂದ್ರು
ಜೀರ್ಣವಾಗೋದಿಲ್ಲ.

ಹುಳಿ ತೇಗು ಗ್ಯಾಸ್ ಅಸಿಡಿಟಿ ಸಮಸ್ಯೆ ಇರುತ್ತದೆ. ಅದಕ್ಕೂ ಕೂಡ ಈ ಕೊತ್ತಂಬರಿ
ಬೀಜದ ನೀರು ಬಹಳ ಒಳ್ಳೆಯದು. ಇವತ್ತಿನಿಂದಲೇ ನೀವು ಕುಡಿಯಲು ಆರಂಭಿಸಬೇಕು. ಇನ್ನು ಮಧುಮೇಹ ಸಮಸ್ಯೆಯನ್ನು ನಿಯಂತ್ರಣಕ್ಕೆ ತರುವುದು ಬಹಳ ಕಷ್ಟ.

ಕೊತ್ತಂಬರಿ ನೀರಿನಿಂದ ಇದನ್ನು ಕೂಡ ನಿಯಂತ್ರಿಸಬಹುದು, ಕಾರಣ ಇದು ರಕ್ತದಲ್ಲಿನ ಇನ್ಸುಲಿನ್ ಪ್ರಮಾಣವನ್ನು ನಿಯಂತ್ರಿಸುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾದರೆ ಮಧುಮೇಹ ಸಮಸ್ಯೆಯಿಂದ ಪರಿಹಾರ ದೊರೆಯುತ್ತದೆ.

ಪಿರಿಯಡ್ ಸಮಸ್ಯೆ ಕಡಿಮೆಯಾಗುತ್ತದೆ. ಕೆಲವರಿಗೆ ಸರಿಯಾಗಿ ಪಿರಿಯಡ್ಸ್ ಆಗೋದಿಲ್ಲ ಅಥವಾ ಪಿರಿಯಡ್ ಸಮಯದಲ್ಲಿ ತುಂಬಾನೇ ಹೊಟ್ಟೆನೋವು ಅಧಿಕ ರಕ್ತಸ್ರಾವದಿಂದ ಬಳಲುತ್ತಿರುತ್ತಾರೆ, ಅಂತವರು ಕೂಡ ಧನಿಯ ನೀರು ಕುಡಿದರೆ ಉತ್ತಮ.

ಅನಿಮಿಯಾ ರಕ್ತಹೀನತೆ ಸಮಸ್ಯೆ ಕೆಲವರಿಗೆ ಇದೆ, ಇದಕ್ಕೂ ಕೂಡ ಕೊತ್ತಂಬರಿ ಬೀಜದ ನೀರು ಬಹಳ ಉತ್ತಮ. ಇದು ದೇಹದಲ್ಲಿ ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತದೆ. ಕೆಲವರಿಗೆ ಕೂದಲು ವಿಪರೀತವಾಗಿ ಉದುರುತ್ತದೆ, ಏನೇ ಹಚ್ಚಿದರೂ ಪರಿಹಾರ ದೊರೆಯುವುದಿಲ್ಲ. ಅಂತವರಿಗೆ ಇದು ಉತ್ತಮ.

ಕೊತ್ತಂಬರಿ ನೀರು ಕುಡಿಯುವುದರಿಂದ ಇದು ಕೂದಲನ್ನು ಬಲಪಡಿಸುತ್ತದೆ. ಕೊತ್ತಂಬರಿ ಬೀಜದಲ್ಲಿ
ಲ್ಲಿ ವಿಟಮಿನ್ ಕೆ, ವಿಟಮಿನ್ ಸಿ ಮತ್ತು ವಿಟಮಿನ್ ಎ ಹೇರಳವಾಗಿದೆ. ಹೀಗಾಗಿ ಕೂದಲು ಉದುರುವುದು
ತಕ್ಷಣವೇ ನಿಂತುಬಿಡುತ್ತದೆ.

ರಕ್ತವನ್ನು ಶುದ್ಧೀಕರಿಸುತ್ತದೆ. ಇದರಿಂದ ಮೊಡವೆ ಮೂಡೋದಿಲ್ಲ, ಹಾಗೆ ಮುಖದಲ್ಲಿ ಕಲೆಗಳಿದ್ದರೆ ಪಿಗ್ಮೆಂಟೇಶನ್ ಮೊಡವೆ ಕಲೆ ಯಾವುದೇ ರೀತಿಯ ಕಲೆಗಳಿದ್ದರೆ ಅದು ಕೂಡ ನಿವಾರಣೆ ಆಗುತ್ತದೆ.

ಕೆಲವರಿಗೆ ಮೊಣಕಾಲು ನೋವು ಕೀಳುಗಳಲ್ಲಿ ನೋವು ಹಾಗೆ ಸಂಧಿವಾತದ ಸಮಸ್ಯೆ ಇರುತ್ತದೆ, ಅದನ್ನು ಕೂಡ ಈ ಕೊತ್ತಂಬರಿ ಬೀಜದ ನೀರು ನಿವಾರಿಸುತ್ತದೆ. ಇದು ನಿಮಗೆ ತುಂಬಾನೇ ಆರಾಮವನ್ನು ಒದಗಿಸುತ್ತದೆ. ಬೇಡದ ಕೊಲೆಸ್ಟ್ರಾಲ್ ಅನ್ನು ಕರಗಿಸುತ್ತದೆ. ಇದರಿಂದ ಹೃದಯವು ಆರೋಗ್ಯವಾಗಿರುತ್ತದೆ.

ಹೈ ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಪ್ರತಿದಿನ ದನಿಯಾ ನೀರನ್ನು ಕುಡಿದರೆ ಒಳ್ಳೆಯದು. ಇನ್ನು ಮಲಬದ್ಧತೆಯನ್ನು ಇದು ನಿವಾರಿಸುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಹೀಗೆ ಹೇಳ್ತಾ ಹೋದರೆ ಇದರ ಲಾಭಗಳ ಪಟ್ಟಿ ಮುಗಿಯಲ್ಲ, ಆದ್ದರಿಂದ ನೀವು ಒಟ್ಟಾರೆ ಆರೋಗ್ಯವನ್ನು ಕಾಪಾಡಬೇಕೆಂದಿದ್ದರೆ ತಪ್ಪದೆ ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಒಂದು ಲೋಟ ಕೊತ್ತಂಬರಿ ಬೀಜದ ನೀರನ್ನು ಸೇವನೆ ಮಾಡಿ.

ನೋಡಿದ್ರಲ್ಲ ನಮ್ಮ ಅಡುಗೆ ಮನೆಯಲ್ಲಿರುವ ದನಿಯ ಬೀಜದಿಂದ ನಿಮಗೆ ಊಹಿಸಲು ಧ್ಯವಿಲ್ಲದಷ್ಟು ಆರೋಗ್ಯ ಲಾಭ ದೊರೆಯುತ್ತದೆ. ಆದ್ದರಿಂದ ತಪ್ಪದೆ ಪ್ರತಿದಿನ ದನಿಯ ಬೀಜದ ನೀರನ್ನು ಕುಡಿಯಲು ಮರೆಯದಿರಿ.

WhatsApp Group Join Now
Telegram Group Join Now

Leave a Comment